Yakshagana is a captivating theater art, rich with music, dance, acting, dialogue, and vibrant costumes. It’s a theatrical form of presenting Mythological and historical stories. The word Yakshagana means the songs of the Demi-Gods (yaksha ‘meaning celestial beings, and ‘gana’ meaning song or music). The performance involves a group of performers including actors, musicians, and a narrator. The narrator, called the "Bhagavatha," sets the scene and narrates the story while the actors act out the story through dialogues and dance. The music is provided by a group of musicians playing traditional instruments such as the Maddale (a double-headed drum), and the Chande (a percussion instrument), together accompanying the narrator who is the vocalist.
The stage design and unique rendering is similar to that of the Western Opera. Traditionally, Yakshagana would go on all night. It is sometimes simply called as Aataā in both Kannada and Tulu, meaning “play”.
Towards the south from Dakshina kannada to Kasaragod of Tulu Nadu region, the form of Yakshagana is called as ‘Thenku thittu’ and towards north from Udupi up to Uttara Kannada it’s called as ‘Badagu Thittu’.
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖ ರಂಗಭೂಮಿಯ ಕಲೆ, ಕರಾವಳಿಯ ಗಂಡು ಕಲೆ. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಎತ್ತಿರುವ ನಮ್ಮ ನಾಡಿನ ವಿಶೇಷ ಕಲೆಗಳಲ್ಲಿ ಒಂದು. ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ಸಂಸ್ಕೃತಿಯೊಂದಿಗೆ ಹೊಸೆದುಕೊಂಡಿರುವ ಸಮರ್ಥ ಕಲೆಯೇ ಯಕ್ಷಗಾನ. ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನ ಅಲ್ಲಿಯ ಜನರ ಜೀವನಾಡಿ. ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಹಾಗೂ ಬಡಾಬಡಗುತಿಟ್ಟು ಎಂಬ 3 ವಿಧಗಳಿಗೆ. ಪಾತ್ರಧಾರಿ ಅಭಿನಯಿಸುವ ರೀತಿ, ವೇಷಭೂಷಣಗಳಲ್ಲಿ ಭಿನ್ನತೆ, ಹಾಗೂ ಭಾಗವತಿಕೆಯಲ್ಲಿ ವ್ಯತ್ಯಾಸವಿರುವ ಈ ಮೂರೂ ವಿಧಗಳೂ ಕೂಡ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ.
ಯಕ್ಷಗಾನದ ಇತಿಹಾಸ ಕೂಡ ಪುರಾತನವಾದದ್ದು. ತಂಜಾವೂರಿನ ಅರಸರು, ಮೈಸೂರಿನ ಮುಮ್ಮುಡಿ ಕೃಷ್ಣರಾಜರು, ಸಾಹಿತ್ಯದಲ್ಲಿ ಗಣ್ಯಸ್ಥಾನ ಗಳಿಸಿದ ಮುದ್ದಣಾದಿಗಳು ಯಕ್ಷಗಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಯಕ್ಷಗಾನದ ಸೂತ್ರಧಾರಿಯೇ ಭಾಗವತ. ಭಾಗವತಿಕೆ ಯಕ್ಷಗಾನದ ಜೀವಾಳ, ಪ್ರಸಂಗದ ಕಥೆಯನ್ನು ಹಾಡಿನಲ್ಲಿ ಹೇಳುತ್ತಾ, ಭಾಗವತನೇ ಯಕ್ಷಗಾನದ ಕಥಾನಕವನ್ನು ಪ್ರಾರಂಭದಿಂದ ಕೊನೆಯ ತನಕ ಒಯ್ಯುತ್ತ, ಪಾತ್ರಧಾರಿಗಳಿಗೆ ಮಾರ್ಗದರ್ಶಿಯಾಗಿರುತ್ತಾನೆ. ಭಾಗವತರೊಂದಿಗೆ ಯಕ್ಷಗಾನದ ಗತ್ತಿನ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುವವರು ಹಿಮ್ಮೇಳದವರು. ಹಿಮ್ಮೇಳ ಅಂದರೆ, ವಿಶೇಷವಾಗಿ ಯಕ್ಷಗಾನದಲ್ಲಿ ಬಳಸಲ್ಪಡುವ ಚಂಡೆ, ಮದ್ದಲೆ, ತಾಳ, ಜಾಗಟೆ ಮುಂತಾದ ಸಂಗೀತ ಉಪಕರಣಗಳನ್ನು ನುಡಿಸುವ ಕಲಾವಿದರು. ಚಂಡೆ, ಮೃದಂಗದ ಶಬ್ಧವೇ ಯಕ್ಷಗಾನಕ್ಕೊಂದು ಗತ್ತು. ಯಕ್ಷಗಾನದ ಪಾತ್ರಧಾರಿಗಳು ಚಂಡೆ ಮೃದಂಗದ ತಾಳಕ್ಕೆ ಹೆಜ್ಜೆ ಹಾಕುತ್ತ, ಮಾತಿನ ಮೂಲಕ ಕಥೆಯನ್ನು ಪ್ರೇಕ್ಷಕರಿಗೆ ವಿವರಿಸುತ್ತಾರೆ. ಪಾತ್ರಧಾರಿಗಳ ವೇಷಗಳೂ ತಿಟ್ಟುವಿನ ಯಕ್ಷಗಾನದಲ್ಲಿ ಸ್ವಲ್ಪ ಭಿನ್ನತೆಗಳಿದ್ದರೂ, ಆ ಎಲ್ಲ ವೇಷಭೂಷಗಳ ವೈಭವೂ ಅಷ್ಟೇ ಆಕರ್ಷಣೀಯ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಂದು ಪಾತ್ರಕ್ಕೆ ತಕ್ಕ ವೇಷಗಳು ಹಾಗೂ ಮುಖವರ್ಣಿಕೆಯಿರುತ್ತದೆ. ಅಂತಹ ವಿಶಿಷ್ಟತೆಯಿಂದಲೇ ಯಕ್ಷಗಾನ ಪ್ರಸಿದ್ಧಿ ಪಡೆದಿದೆ.
ಯಕ್ಷಗಾನದಲ್ಲಿ ಬರಿಯ ಮನೋರಂಜನೆಯೊಂದೇ ಇಲ್ಲ, ಇದರಲ್ಲಿ ಜ್ಞಾನವಿದೆ. ಶತ ಶತಮಾನಗಳಿಂದ ಯಕ್ಷಕಲೆಯ ಅಭಿವೃದ್ಧಿಗಾಗಿ ಅದೆಷ್ಟೋ ಕಲಾವಿದರು, ಸಾಹಿತಿಗಳು ಅಧ್ಯಯನಕಾರರು ಶ್ರಮಿಸಿದ್ದಾರೆ. ಇದೊಂದು ಶುದ್ಧ ಜ್ಞಾನದ ಕಲೆ, ರಾಜರ ಕಾಲದಿಂದಲೂ ಸಮಾಜದಲ್ಲಿ ಅತ್ಯಂತ ಗೌರವ ಪಡೆದುಕೊಂಡಿದ್ದ ಸಮೃದ್ಧವಾದ, ಶ್ರೀಮಂತ ಕಲೆಯೊಂದು ನಮ್ಮ ನಾಡಿನಲ್ಲಿ, ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ ಎಂಬುದು ನಮ್ಮೆಲ್ಲರ ಹೆಮ್ಮೆಯೇ ಸರಿ.